ವಿಕಿಪೀಡಿಯಕ್ಕೆ ಸ್ವಾಗತ!

ಕನ್ನಡ ವಿಕಿಪೀಡಿಯ ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ

ಈ ವಿಶ್ವಕೋಶ ಬಹು ಭಾಷೆಗಳಲ್ಲಿ ಲಭ್ಯವಿದೆ. ಪ್ರಸ್ತುತ ಕನ್ನಡ ಆವೃತ್ತಿಯು ೨೩,೪೩೫ ವಿಷಯಗಳ ಕುರಿತಾದ ಪುಟಗಳನ್ನು ಹೊಂದಿದೆ.

  • ಅನುವಾದಿಸಲು, ಸಂಪಾದಕರಾಗಲು ಉತ್ಸಾಹವಿರುವವರು ವಿಕಿಪೀಡಿಯದ ಸಮುದಾಯ ಪುಟಕ್ಕೆ ಭೇಟಿ ನೀಡಿ.
  • ನೇರವಾಗಿ ಕನ್ನಡದಲ್ಲಿ ಬರೆಯುವುದರ ಬಗ್ಗೆ ಸಹಾಯಕ್ಕಾಗಿ ಲಿಪ್ಯಂತರ ಸಹಾಯ ಪುಟವನ್ನು , ಕೀಲಿಮಣೆ ಅಪ್ಲಿಕೇಶನ್,ಇನ್‌ಪುಟ್ ಪರಿಕರವನ್ನು ನೋಡಿ.
  • ವಿಕಿಪೀಡಿಯಾದಲ್ಲಿ ಸಂಪಾದನೆ ಕಲಿಯಲು ಪ್ರಯೋಗಾರ್ಥ ವಿಕಿಪೀಡಿಯಾ ಪುಟವನ್ನು ಉಪಯೋಗಿಸಿಕೊಳ್ಳಬಹುದು.
  • ಕನ್ನಡ ವಿಕಿಪೀಡಿಯ ಕುರಿತು ಒಂದು ಅಂಚೆಪೆಟ್ಟಿಗೆ ಕೂಡ ಇದೆ,
  • ಹೆಚ್ಚಿನ ಸಹಾಯ ಪಡೆಯಲು ಅಂಚೆಪೆಟ್ಟಿಗೆಗೆ ನೋಂದಾಯಿಸಿಕೊಂಡು wikikn-l@lists.wikimedia.org ವಿಳಾಸಕ್ಕೆ ಇ-ಮೇಲ್ ಕಳುಹಿಸಬಹುದು.
  • ಕನ್ನಡ ವಿಕಿಪೀಡಿಯದ ಐ.ಆರ್.ಸಿ #wikipedia-kn ಸಂಪರ್ಕ ಸಾಧಿಸಿ ಚಾನಲ್ ಮುಖಾಂತರ ಸಂಪರ್ಕ ಸಾಧಿಸಬಹುದು.

ವಿಶೇಷ ಸೂಚನೆ: ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲಿ ಮಾತ್ರ ಬರೆಯಿರಿ.
ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು (FAQ)
ಉಂಗುರಕ್ಕೆ ಅಳವಡಿಸಲಾಗಿರುವ ಸುಂದರ ವಜ್ರ

ವಜ್ರವು ಇಂಗಾಲದ ಒಂದು ರೂಪ. ಇದು ಪ್ರಕೃತಿಯಲ್ಲಿರುವ ವಸ್ತುಗಳಲ್ಲಿ ಅತ್ಯಂತ ಕಠಿಣವಾದುದು. ಅಲ್ಲದೆ ಇದುವರೆಗೆ ತಯಾರಾಗಿರುವ ವಸ್ತುಗಳಲ್ಲಿ ಮೂರನೆಯ ಅತಿ ಕಠಿಣ ವಸ್ತು. ವಜ್ರವು ತನ್ನ ಕಾಠಿಣ್ಯ ಮತ್ತು ಬೆಳಕನ್ನು ಚದುರಿಸುವ ಗುಣಗಳಿಂದಾಗಿ ಆಭರಣಗಳಲ್ಲಿ ಮತ್ತು ಕೈಗಾರಿಕೆಗಳಲ್ಲಿ ಉಪಯೋಗಿಸಲ್ಪಡುತ್ತದೆ. ಪ್ರತಿವರ್ಷ ಸುಮಾರು ೧೩ ಕೋಟಿ ಕ್ಯಾರಟ್ (೨೬೦೦೦ ಕಿ.ಗ್ರಾಂ) ಗಳಷ್ಟು ವಜ್ರವನ್ನು ಗಣಿಗಳಿಂದ ಪಡೆಯಲಾಗುವುದು. ಇದರ ಒಟ್ಟು ಮೌಲ್ಯ ಸುಮಾರು ೯ ಬಿಲಿಯನ್ ಡಾಲರುಗಳಷ್ಟು. ಇದಲ್ಲದೆ ಸಾಲಿಯಾನ ಸುಮಾರು ೧೦೦,೦೦೦ ಕಿಲೋಗ್ರಾಂ ಗಳಷ್ಟು ಕೃತಕ ವಜ್ರವನ್ನು ಉತ್ಪಾದಿಸಲಾಗುತ್ತದೆ. ಈ ಕೃತಕ ವಜ್ರವು ಹೆಚ್ಚಾಗಿ ಕೈಗಾರಿಕೆಗಳಲ್ಲಿ ಬಳಸಲ್ಪಡುತ್ತದೆ. ವಜ್ರದ ಆಂಗ್ಲ ಹೆಸರಾದ ಡೈಮಂಡ್ ಪದವು ಅಜೇಯ ಎಂಬ ಅರ್ಥವುಳ್ಳ ಅದಮಾಸ್ ಎಂಬ ಗ್ರೀಕ್ ಶಬ್ದದಿಂದ ವ್ಯುತ್ಪ್ತತ್ತಿಯಾಗಿದೆ. ಅತಿ ಪ್ರಾಚೀನ ಕಾಲದಿಂದಲೂ ವಜ್ರಗಳನ್ನು ಧಾರ್ಮಿಕ ಸಂಕೇತಗಳಾಗಿ ಮತ್ತು ಕೊರೆಯುವ ಸಾಧನಗಳಾಗಿ ಮಾನವನು ಬಳಸುತ್ತಾ ಬಂದಿರುವನು. ಅಮೂಲ್ಯರತ್ನವನ್ನಾಗಿ ವಜ್ರವನ್ನು ಜೋಪಾನ ಮಾಡಿಕೊಂಡೂ ಬಂದಿರುವನು. ೧೯ನೆಯ ಶತಮಾನದಿಂದೀಚೆಗೆ ವಜ್ರದ ಜನಪ್ರಿಯತೆ ಹೆಚ್ಚುತ್ತಲೇ ಬಂದಿದೆ. ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ವಜ್ರಗಳ ಲಭ್ಯತೆ, ಕತ್ತರಿಸಲು ಮತ್ತು ಹೊಳಪು ನೀಡಲು ಉತ್ತಮ ನವೀನ ತಂತ್ರಜ್ಞಾನ ಮತ್ತು ಒಟ್ಟಾರೆ ವಿಶ್ವದ ಆರ್ಥಿಕ ಸ್ಥಿತಿಯ ಮೇಲ್ಮುಖ ಪ್ರಗತಿ ಇವುಗಳು ವಜ್ರವನ್ನು ಹೆಚ್ಚುಹೆಚ್ಚು ಜನರೆಡೆಗ ತಲುಪಿಸುತ್ತಿವೆ. ಜಗತ್ತಿನ ಒಟ್ಟೂ ನೈಸರ್ಗಿಕ ವಜ್ರಗಳಲ್ಲಿ ೪೯% ಪಾಲು ಮಧ್ಯ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ದೊರೆಯುತ್ತದೆ.

« ಹಿಂದಿನ ಸಂಚಿಕೆ | ಹಳೆಯ ಸಂಚಿಕೆಗಳು »

ಮುಂದಿನ ಸಂಚಿಕೆಯನ್ನು ಆಯ್ಕೆ ಮಾಡಿ...

ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:

    • ಗಂಟಲು ಕಶೇರುಕ ಅಂಗರಚನಾಶಾಸ್ತ್ರದಲ್ಲಿ, ಗಂಟಲು ಎಂದರೆ ಕುತ್ತಿಗೆಯ ಮುಂಭಾಗ, ಮತ್ತು ಕಶೇರುಖಂಡದ ಮುಂದೆ ಸ್ಥಿತವಾಗಿರುತ್ತದೆ. ಇದು ಗ್ರಸನಕೂಪ ಮತ್ತು ಗಂಟಲಗೂಡನ್ನು ಹೊಂದಿರುತ್ತದೆ. ಕಿರುನಾಲಿಗೆಯು ಇದರ ಒಂದು ಪ್ರಮುಖ ವಿಭಾಗವಾಗಿದೆ.
    • ಎಎಸ್9100 ವ್ಯಾಪಕವಾಗಿ ಅಳವಡಿಸಿಕೊಳ್ಳಲಾದ ವೈಮಾನಿಕ ಉದ್ಯಮದ ಪ್ರಮಾಣೀಕೃತ ಗುಣಮಟ್ಟ ನಿರ್ವಹಣಾ ವ್ಯವಸ್ಥೆ. ಇದು ಅಕ್ಟೋಬರ್ ೧೯೯೯ ರಲ್ಲಿ ಆಟೋಮೋಟಿವ್ ಎಂಜಿನಿಯರ್ಸ್ ಸೊಸೈಟಿ ಮತ್ತು ಯುರೋಪಿಯನ್ ಅಸೋಸಿಯೇಷನ್ ಏರೋಸ್ಪೇಸ್ ಇಂಡಸ್ಟ್ರೀಸ್ ಸೇರಿ ಬಿಡುಗಡೆ ಮಾಡಿದವು .
    • ರೋಸರಿ ಎನ್ನುವುದು ಕೆಥೊಲಿಕ್ ಕ್ರೈಸ್ತ ಸಮುದಾಯದವರು ಪ್ರಾರ್ಥನೆಗಾಗಿ ಹಾಗೂ ಜಪಕ್ಕಾಗಿ ಬಳಸುವ ಮಾಲೆ. ಕೆಥೊಲಿಕ್ ಕ್ರಿಶ್ಚಿಯನ್ನರಿಗೆ ಮಾತೆ ಮರಿಯಾ ಕೊಟ್ಟ ಅದ್ಭುತ ವರ 'ರೋಸರಿ ಎನ್ನಲಾಗಿದೆ.
      ಮಗುವನ್ನು ಕಾಂಗರೂ ರೀತಿಯಲ್ಲೇ ಎದೆಗವಚಿಕಿಕೊಂಡು ನವಜಾತ ಶಿಶುವಿನ ಆರೈಕೆ ಮಾಡುತ್ತಿರುವ ತಾಯಿ
    • ಕಾಂಗರೂ ಕಾಳಜಿ (ಚಿತ್ರಿತ) ಕಾಂಗರೂ ಪ್ರಾಣಿ ತನ್ನ ಮಗುವುನ್ನು ರಕ್ಷಣೆ ಮಾಡಿಕೊಳ್ಳುವ ಮಾದರಿಯಲ್ಲಿಯೇ ತಾಯಂದಿರು ನವಜಾತ ಶಿಶುವನ್ನು ಆರೈಕೆ ಮಾಡುವ ವಿಧಾನವಾಗಿದೆ. ಮಗುವನ್ನು ಕಾಂಗರೂ ರೀತಿಯಲ್ಲೇ ಎದೆಗವುಚುವುದರಿಂದ ನವಜಾತ ಶಿಶುವಿನ ತೂಕದಲ್ಲಿ ಹೆಚ್ಚಳವಾಗಲಿದೆ.
    • ಟೋಯೋಟಾ ಉತ್ಪಾದನಾ ವ್ಯವಸ್ಥೆ (ಟಿಪಿಎಸ್) (Toyota Production System (TPS) ಟೊಯೋಟಾ ಅಭಿವೃದ್ಧಿಪಡಿಸಿದ ನಿರ್ವಹಣಾ ತತ್ವಶಾಸ್ತ್ರ ಮತ್ತು ಅಭ್ಯಾಸಗಳನ್ನು ಒಳಗೊಂಡ ಸಮಗ್ರ ತಾಂತ್ರಿಕ ವ್ಯವಸ್ಥೆಯಾಗಿದೆ.
    • ಜೂನ್ ೧೨ : ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ -ಉತ್ತರ ಕೊರಿಯಾ ಅಧ್ಯಕ್ಷ ಕಿಂ ಜಾಂಗ್ ಉನ್ ಭೇಟಿ ಸಫಲ; ಸಂಪೂರ್ಣ ಅಣ್ವಸ್ತ್ರ ನಿಶಸ್ತ್ರೀಕರಣಕ್ಕೆ ಕಿಂ ಒಪ್ಪಿಗೆ
    • ಜೂನ್ ೧೦ : ಸ್ಕೋ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ- ಚೈನಾದ ಓಬಿಓಆರ್ ಗೆ ಬೆಂಬಲ ಸೂಚಿಸಲು ನಕಾರ
    • ಮೇ ೨೭ :ಐರ್ಲೆಂಡ್‌ನಲ್ಲಿ ಗರ್ಭಪಾತ ನಿಷೇಧ ರದ್ದು.
    • ಮೇ ೨೫ : ಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್ ಆಗಿ ರಮೇಶ್ ಕುಮಾರ್ ಆಯ್ಕೆ.
    • ಮೇ ೨೮: ಕಾಮೆಡ್ ಕೆ ಫಲಿತಾಂಶ ಪ್ರಕಟ. ಬೆಂಗಳೂರಿನ ದುರ್ಬ ಆದಿತ್ಯನಿಗೆ ಮೊದಲ ಸ್ಥಾನ.

    ಗೂಗಲ್ ಡೂಡಲ್ ಗೌರವಿತ ಲೇಖನ/ ವ್ಯಕ್ತಿಗಳ ಲೇಖನಗಳು


    ಮಧುಮೇಹದ ಯುನಿವರ್ಸಲ್ ನೀಲಿ ವಲಯ ಚಿಹ್ನೆ
    ವಿಕಿಪೀಡಿಯ ಸಾಧಕರು
    Anoop Rao

    ನಾವು ಈ ಬಾರಿ ಪರಿಚಯಿಸುತ್ತಿರುವ ವಿಕಿಪೀಡಿಯ ಸಾಧಕರು ಅನೂಪ್ ರಾವ್.

    ಇವರು ಮೊದಲಿಗೆ ‍FANDOM ನಲ್ಲಿ VSTF ಸದಸ್ಯರಾಗಿದ್ದರು. ವಿಕಿಯಾದಲ್ಲಿ ಇವರು ಸ್ಪ್ಯಾಮ್, ವಿಧ್ವಂಸಕತೆ, ಸೂಕ್ತವಲ್ಲದ ಅಪ್‌ಲೋಡುಗಳನ್ನು ತೆಗೆದುಹಾಕುವ ಕೆಲಸವನ್ನು ಮಾಡಿದ್ದಾರೆ. ಅಲ್ಲಿ ಇವರು ವಿಕಿ ಬಗ್ಗೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರು. ಅಲ್ಲಿ ಕಲಿತ ವಿಷಯಗಳು ಕನ್ನಡ ವಿಕಿಪೀಡಿಯದಲ್ಲಿ ತಾಂತ್ರಿಕವಾಗಿ ತುಂಬಾ ಮುಖ್ಯ ಪಾತ್ರವಹಿಸಿದೆ. ಇವರಿಗೆ ಸಮಯ ಸಿಕ್ಕಾಗ ಟೆಂಪ್ಲೇಟು, CSS ಸಹಾಯದಿಂದ ಡಿಸೈನ್ಗಳನ್ನು ಮಾಡುವುದು ಇತ್ಯಾದಿ ತಾಂತ್ರಿಕ ಕೆಲಸಗಳನ್ನು ಮಾಡುತ್ತಾರೆ.

    ಕನ್ನಡ ವಿಕಿಪೀಡಿಯದ ಮತ್ತು ಇತರ ಕನ್ನಡ ವಿಕಿಗಳ (ವಿಕಿಸೋರ್ಸ್, ವಿಕ್ಷನರಿ,ವಿಕಿಕೋಟ್‍) ನಿರ್ವಾಹಕರಲ್ಲಿ ಅನೂಪ್‌ರವರೂ ಒಬ್ಬರು. ಇವರು ನಿರ್ವಾಹಕರಾಗಿ ಅನೇಕ ತಾಂತ್ರಿಕ ಕೆಲಸಗಳನ್ನು ಕನ್ನಡ ವಿಕಿಪೀಡಿಯದಲ್ಲಿ ಮಾಡಿದ್ದಾರೆ. ತಾಂತ್ರಿಕ ಕೆಲಸಗಳಲ್ಲದೇ ಇತರ ಲೇಖನ ಬರೆಯುವುದು, ಸಮುದಾಯಕ್ಕೆ ತಾಂತ್ರಿಕ ತರಬೇತಿ ನೀಡುವ ಕೆಲಸವನ್ನೂ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ಇವರು ಭಾರತೀಯ ಭಾಷೆಗಳಾದ ಕನ್ನಡ ಮತ್ತು ಹಿಂದಿಯಲ್ಲಿ FANDOMನಲ್ಲಿ ಮಾಡುತ್ತಿರುವ ಕೆಲಸಗಳಿಗಾಗಿ ಸಿಬ್ಬಂಧಿಗಳಿಂದ ಪುರಸ್ಕೃತಗೊಂಡಿದ್ದಾರೆ.

    ಈ ವರೆಗಿನ ಸಾಧಕರ ಪಟ್ಟಿ ಇಲ್ಲಿದೆ.

    ವಿಕಿಪೀಡಿಯ ಪರ್ಯಟನೆ
    ಕರ್ನಾಟಕ ಮತ್ತು ಕನ್ನಡ

    ಜಿಲ್ಲೆಗಳು • ತಾಲ್ಲೂಕುಗಳು • ಪ್ರಮುಖ ಸ್ಥಳಗಳು • ಇತಿಹಾಸ • ಮುಖ್ಯಮಂತ್ರಿಗಳು • ಪ್ರಸಿದ್ಧ ವ್ಯಕ್ತಿಗಳು • ಬೆಂಗಳೂರು • ಕನ್ನಡ ವ್ಯಾಕರಣ • ಕನ್ನಡ ಪತ್ರಿಕೆಗಳು

    ಭೂಗೋಳ

    ಭೂಗೋಳ • ಖಂಡಗಳು • ದೇಶಗಳು • ನಗರಗಳು • ಜಲಸಮೂಹಗಳು • ಪರ್ವತಶ್ರೇಣಿಗಳು • ಮರುಭೂಮಿಗಳು • ಭೂಗೋಳ ಶಾಸ್ತ್ರ • ಸೌರಮಂಡಲ • ಖಗೋಳಶಾಸ್ತ್ರ

    ಕಲೆ ಮತ್ತು ಸಂಸ್ಕೃತಿ

    ಸಂಸ್ಕೃತಿ • ಭಾಷೆಗಳು • ಸಾಹಿತ್ಯ • ಸಾಹಿತಿಗಳು • ಸಂಗೀತ • ಸಂಗೀತಗಾರರು • ಧರ್ಮ • ಜಾನಪದ • ಹಬ್ಬಗಳು • ಕ್ರೀಡೆ • ಪ್ರವಾಸೋದ್ಯಮ • ರಂಗಭೂಮಿ • ಚಿತ್ರರಂಗ • ಪ್ರಾಚ್ಯ ಸಂಶೋಧಕರು

    ಜನ - ಜೀವನ

    ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು • ನೊಬೆಲ್ ಪ್ರಶಸ್ತಿ ಪುರಸ್ಕೃತರು • ಸ್ವಾತಂತ್ರ್ಯ ಹೋರಾಟಗಾರರು • ಭಾರತ ರತ್ನ ಪುರಸ್ಕೃತರು • ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು • ಉದ್ಯಮಿಗಳು ಉದ್ಯಮಗಳು

    ಇತಿಹಾಸ

    ಇತಿಹಾಸ • ಐತಿಹಾಸಿಕ ಸ್ಥಳಗಳು-ಸ್ಮಾರಕಗಳು • ವಿಶ್ವ ಪರಂಪರೆಯ ತಾಣಗಳು • ಭಾರತದ ಇತಿಹಾಸ • ಕಾಲ

    ವಿಜ್ಞಾನ ಮತ್ತು ತಂತ್ರಜ್ಞಾನ

    ವಿಜ್ಞಾನ • ತಂತ್ರಜ್ಞಾನ • ತಂತ್ರಜ್ಞರು • ವಿಜ್ಞಾನಿಗಳು • ಖಗೋಳಶಾಸ್ತ್ರ• ಜೀವಶಾಸ್ತ್ರ • ರಸಾಯನಶಾಸ್ತ್ರ • ಭೂಶಾಸ್ತ್ರ • ಭೌತಶಾಸ್ತ್ರ • ಗಣಿತ

    ಧರ್ಮ ಮತ್ತು ಆಧ್ಯಾತ್ಮಿಕತೆ

    ಧರ್ಮ • ಆಧ್ಯಾತ್ಮ • ಹಿಂದೂ ಧರ್ಮ • ಜೈನ ಧರ್ಮ • ಬೌದ್ಧ ಧರ್ಮ • ಇಸ್ಲಾಂ ಧರ್ಮ • ಕ್ರೈಸ್ತ ಧರ್ಮ • ಯಹೂದಿ ಧರ್ಮ • ಸಿಖ್ ಧರ್ಮ • ಧಾರ್ಮಿಕ ಗ್ರಂಥಗಳು • ಪುರಾಣ

    ಸಮಾಜ ಮತ್ತು ರಾಜಕೀಯ

    ಸಮಾಜ • ರಾಜಕೀಯ • ಶಿಕ್ಷಣ • ಭಾರತದ ರಾಷ್ಟ್ರಪತಿಗಳು • ಭಾರತದ ಪ್ರಧಾನ ಮಂತ್ರಿಗಳು • ಸಮಾಜಸೇವಕರು • ಭಯೋತ್ಪಾದನೆ

    ಕನ್ನಡ ಸಿನೆಮಾ

    ಚಲನಚಿತ್ರಗಳು • ನಿರ್ದೇಶಕರು • ನಟರು • ನಟಿಯರು • ನಿರ್ಮಾಪಕರು • ಚಿತ್ರ ಸಂಗೀತ • ಚಿತ್ರಸಾಹಿತಿಗಳು

    ಮನೋರಂಜನೆ ಮತ್ತು ಕ್ರೀಡೆ

    ಕ್ರೀಡೆ • ಕ್ರೀಡಾಪಟುಗಳು • ಕ್ರೀಡಾ ಪ್ರಶಸ್ತಿಗಳು • ಕ್ರಿಕೆಟ್ • ಟೆನ್ನಿಸ್ • ಪ್ರವಾಸ • ದೂರದರ್ಶನ

    ೦-೯ ಅಂ ಅಃ
    ವರ್ಗಗಳು


    ವಿಕಿಪೀಡಿಯ ಬಳಗದ ಇತರ ಯೋಜನೆಗಳು:
    ಮೆಟಾ-ವಿಕಿ 
    ಪ್ರಾಜೆಕ್ಟ್ ಸಂಯೋಜನೆ 
    ವಿಕಿಮೀಡಿಯ ಕಾಮನ್ಸ್ 
    ಮೀಡಿಯಾ ಕಣಜ 
    ವಿಕ್ಷನರಿ 
    ಶಬ್ದಕೋಶ 
    ವಿಕಿ ಬುಕ್ಸ್ 
    ಪುಸ್ತಕಗಳು 
    ವಿಕಿ ಸೋರ್ಸ್ 
    ಮುಕ್ತ ಸಾಹಿತ್ಯ 
    ವಿಕಿ ಕೋಟ್ 
    ಉಕ್ತಿಗಳು 
    ವಿಕಿ ನ್ಯೂಸ್
    ಸುದ್ದಿ
    ವಿಕಿ ಸ್ಪೀಷೀಸ್
    ಜೈವಿಕ ಮಾಹಿತಿ

    ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಹೋಸ್ಟ್ ಮಾಡಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದೇಣಿಗೆ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ. ದೇಣಿಗೆ ಪುಟ(ಆಂಗ್ಲ ಭಾಷೆಯಲ್ಲಿ).

    This article is issued from Wikipedia. The text is licensed under Creative Commons - Attribution - Sharealike. Additional terms may apply for the media files.